ಕೀರ್ತನೆಗಳು Chapter 18 KANIRV Bible Verse Images

ಕೀರ್ತನೆಗಳು 18 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ಕೀರ್ತನೆಗಳು 18 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ಕೀರ್ತನೆಗಳು 18:1 (KANIRV)
Square Portrait Landscape 4K UHD
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು. ಯೆಹೋವನ ಸೇವಕನಾದ ದಾವೀದನು ಸೌಲನಿಂದಲೂ, ಎಲ್ಲಾ ಶತ್ರುಗಳ ಕೈಯಿಂದಲೂ ತಪ್ಪಿಸಲ್ಪಟ್ಟಾಗ ಯೆಹೋವನ ಘನಕ್ಕಾಗಿ ಈ ಪದ್ಯವನ್ನು ರಚಿಸಿ ಹೇಳಿದನು. ನನ್ನ ಬಲವಾಗಿರುವ ಯೆಹೋವನೇ, ನಿನ್ನಲ್ಲಿಯೇ ಮಮತೆಯಿಡುತ್ತೇನೆ.

ಕೀರ್ತನೆಗಳು 18:2 (KANIRV)
Square Portrait Landscape 4K UHD
ಯೆಹೋವನು ನನ್ನ ಬಂಡೆಯು, ನನ್ನ ಕೋಟೆಯು, ನನ್ನ ವಿಮೋಚಕನು, ನನ್ನ ದೇವರು, ನನ್ನ ಆಶ್ರಯಗಿರಿಯು, ನನ್ನ ಗುರಾಣಿಯು, ನನ್ನ ರಕ್ಷಣೆಯ ಕೊಂಬು ಮತ್ತು ನನ್ನ ದುರ್ಗವು ಆಗಿದ್ದಾನೆ.

ಕೀರ್ತನೆಗಳು 18:3 (KANIRV)
Square Portrait Landscape 4K UHD
ಯೆಹೋವನು ಸ್ತೋತ್ರಕ್ಕೆ ಅರ್ಹನು; ನಾನು ಆತನಿಗೆ ಮೊರೆಯಿಡಲು ಆತನು ನನ್ನನ್ನು ಶತ್ರುಗಳಿಂದ ರಕ್ಷಿಸುತ್ತಾನೆ.

ಕೀರ್ತನೆಗಳು 18:4 (KANIRV)
Square Portrait Landscape 4K UHD
ಮೃತ್ಯುಪಾಶಗಳು ನನಗೆ ಸುತ್ತಿಕೊಂಡವು; ನಾಶಪ್ರವಾಹವು ನನ್ನನ್ನು ನಡುಗಿಸಿತು.

ಕೀರ್ತನೆಗಳು 18:5 (KANIRV)
Square Portrait Landscape 4K UHD
ಪಾತಾಳಪಾಶಗಳು ನನ್ನನ್ನು ಆವರಿಸಿಕೊಂಡವು; ಮರಣಕರವಾದ ಉರುಲುಗಳು ನನ್ನೆದುರಿನಲ್ಲಿದ್ದವು.

ಕೀರ್ತನೆಗಳು 18:6 (KANIRV)
Square Portrait Landscape 4K UHD
ಅಂಥ ಕಷ್ಟದಲ್ಲಿ ನಾನು ಯೆಹೋವನಿಗೆ ಮೊರೆಯಿಟ್ಟೆನು; ನನ್ನ ದೇವರನ್ನು ಪ್ರಾರ್ಥಿಸಿದೆನು. ಆತನು ತನ್ನ ಮಂದಿರದಲ್ಲಿ ನನ್ನ ಶಬ್ದವನ್ನು ಕೇಳಿದನು; ನನ್ನ ಕೂಗು ಆತನಿಗೆ ಕೇಳಿಸಿತು.

ಕೀರ್ತನೆಗಳು 18:7 (KANIRV)
Square Portrait Landscape 4K UHD
ಆಗ ಆತನಿಗೆ ಸಿಟ್ಟೇರಿದ್ದರಿಂದ, ಭೂಮಿಯು ಗಡಗಡನೆ ಕಂಪಿಸಿತು, ಪರ್ವತಗಳ ಬುಡಗಳು ನಡುಗಿ ಕದಲಿದವು.

ಕೀರ್ತನೆಗಳು 18:8 (KANIRV)
Square Portrait Landscape 4K UHD
ಆತನ ಮೂಗಿನಿಂದ ಹೊಗೆಯು ಎದ್ದು; ಆತನ ಬಾಯಿಂದ ಅಗ್ನಿಜ್ವಾಲೆ ಹೊರಟು, ಸಿಕ್ಕಿದ್ದೆಲ್ಲವನ್ನು ದಹಿಸಿ ಕೆಂಡವನ್ನಾಗಿ ಮಾಡಿತು.

ಕೀರ್ತನೆಗಳು 18:9 (KANIRV)
Square Portrait Landscape 4K UHD
ಆತನು ಆಕಾಶವನ್ನು ತಗ್ಗಿಸಿ ಇಳಿದು ಬಂದನು; ಆತನ ಪಾದಗಳ ಕೆಳಗೆ ಕಾರ್ಗತ್ತಲು ಇತ್ತು.

ಕೀರ್ತನೆಗಳು 18:10 (KANIRV)
Square Portrait Landscape 4K UHD
ಕೆರೂಬಿವಾಹನನಾಗಿ ಹಾರಿ, ವಾಯುವೇ ಆತನ ರೆಕ್ಕೆಗಳೋ ಎಂಬಂತೆ ಆತನು ಇಳಿದು ಬಂದನು.

ಕೀರ್ತನೆಗಳು 18:11 (KANIRV)
Square Portrait Landscape 4K UHD
ಕತ್ತಲನ್ನು ತನ್ನ ಸುತ್ತಲು ಗುಡಾರದಂತೆ ಕವಿಸಿಕೊಂಡು, ಜಲಮಯವಾಗಿರುವ ನೀಲಮೇಘಗಳ ಮಧ್ಯದಲ್ಲಿ ಮರೆಯಾದನು.

ಕೀರ್ತನೆಗಳು 18:12 (KANIRV)
Square Portrait Landscape 4K UHD
ಆತನ ಸನ್ನಿಧಿಯ ಪ್ರಕಾಶದಿಂದ ಕಲ್ಮಳೆಯೂ, ಉರಿಗೆಂಡಗಳೂ ಹೊರಟು, ಆತನ ಸುತ್ತಲಿದ್ದ ಕಪ್ಪು ಮೋಡಗಳನ್ನು ದಾಟಿ ಸುರಿದವು.

ಕೀರ್ತನೆಗಳು 18:13 (KANIRV)
Square Portrait Landscape 4K UHD
ಯೆಹೋವನು ಆಕಾಶದಲ್ಲಿ ಗುಡುಗಿದನು; ಪರಾತ್ಪರನಾದ ದೇವರು ಧ್ವನಿಗೊಟ್ಟನು. ಕಲ್ಮಳೆಯೂ, ಉರಿಗೆಂಡಗಳೂ ಹೊರಟವು.

ಕೀರ್ತನೆಗಳು 18:14 (KANIRV)
Square Portrait Landscape 4K UHD
ಆತನು ಬಾಣಗಳನ್ನೆಸೆದು ಶತ್ರುಗಳನ್ನು ಚದರಿಸಿಬಿಟ್ಟನು; ಸಿಡಿಲುಗಳಿಂದ ಕಳವಳಗೊಳಿಸಿದನು.

ಕೀರ್ತನೆಗಳು 18:15 (KANIRV)
Square Portrait Landscape 4K UHD
ಆಗ ಯೆಹೋವನೇ, ನಿನ್ನ ಗದರಿಕೆಯಿಂದಲೂ, ನಿನ್ನ ಶ್ವಾಸಭರದಿಂದಲೂ ಸಮುದ್ರದ ತಳವು ಕಾಣಿಸಿತು. ಭೂಮಂಡಲದ ಅಸ್ತಿವಾರಗಳು ಕಂಡುಬಂದವು.

ಕೀರ್ತನೆಗಳು 18:16 (KANIRV)
Square Portrait Landscape 4K UHD
ಆತನು ಮೇಲಣ ಲೋಕದಿಂದ ಕೈಚಾಚಿ, ನನ್ನನ್ನು ಹಿಡಿದು, ಮಹಾಜಲರಾಶಿಗಳೊಳಗಿಂದ ಎಳೆದನು.

ಕೀರ್ತನೆಗಳು 18:17 (KANIRV)
Square Portrait Landscape 4K UHD
ನನಗಿಂತ ಬಲಿಷ್ಠರೂ, ಪುಷ್ಟರೂ ಆಗಿ ದ್ವೇಷಿಸುತ್ತಿದ್ದ ಶತ್ರುಗಳಿಂದ ನನ್ನನ್ನು ಬಿಡಿಸಿ ರಕ್ಷಿಸಿದನು.

ಕೀರ್ತನೆಗಳು 18:18 (KANIRV)
Square Portrait Landscape 4K UHD
ಅವರು ನನ್ನ ವಿಪತ್ಕಾಲದಲ್ಲಿ ನನ್ನ ಮೇಲೆ ಬಿದ್ದರು, ಆಗ ಯೆಹೋವನು ನನಗೆ ಉದ್ಧಾರಕನಾದನು.

ಕೀರ್ತನೆಗಳು 18:19 (KANIRV)
Square Portrait Landscape 4K UHD
ಆತನು ನನ್ನನ್ನು ಬಿಡಿಸಿ ವಿಶಾಲ ಸ್ಥಳದಲ್ಲಿ ಸೇರಿಸಿದನು; ನನ್ನನ್ನು ಮೆಚ್ಚಿ ರಕ್ಷಿಸಿದನು.

ಕೀರ್ತನೆಗಳು 18:20 (KANIRV)
Square Portrait Landscape 4K UHD
ಯೆಹೋವನು ನನ್ನ ನೀತಿಗೆ ಸರಿಯಾಗಿ ಮೇಲನ್ನು ಮಾಡಿದನು, ನನ್ನ ಕೈಗಳ ಶುದ್ಧತ್ವಕ್ಕೆ ತಕ್ಕಂತೆ ಪ್ರತಿಫಲವನ್ನು ಕೊಟ್ಟನು.

ಕೀರ್ತನೆಗಳು 18:21 (KANIRV)
Square Portrait Landscape 4K UHD
ನಾನು ಯೆಹೋವನ ಮಾರ್ಗವನ್ನೇ ಅನುಸರಿಸಿದೆನಲ್ಲಾ; ನನ್ನ ದೇವರನ್ನು ಬಿಟ್ಟು ದುಷ್ಟನಾಗಲಿಲ್ಲವಲ್ಲಾ.

ಕೀರ್ತನೆಗಳು 18:22 (KANIRV)
Square Portrait Landscape 4K UHD
ನಾನು ಆತನ ನೀತಿಯ ಆಜ್ಞೆಗಳನ್ನು ಯಾವಾಗಲೂ ನನ್ನ ಎದುರಿನಲ್ಲಿ ಇಟ್ಟುಕೊಂಡೆನು; ಆತನ ವಿಧಿಗಳನ್ನು ಅಲಕ್ಷ್ಯಮಾಡಲೇ ಇಲ್ಲ.

ಕೀರ್ತನೆಗಳು 18:23 (KANIRV)
Square Portrait Landscape 4K UHD
ನಾನು ಆತನ ದೃಷ್ಟಿಯಲ್ಲಿ ನಿರ್ದೋಷಿಯು; ಪಾಪದಲ್ಲಿ ಬೀಳದಂತೆ ಜಾಗರೂಕತೆಯಿಂದ ನಡೆದುಕೊಂಡೆನು.

ಕೀರ್ತನೆಗಳು 18:24 (KANIRV)
Square Portrait Landscape 4K UHD
ಆದುದರಿಂದ ನಾನು ನೀತಿವಂತನೂ, ನಿರಪರಾಧಿಯೂ ಎಂದು ನೋಡಿ, ಯೆಹೋವನು ತಕ್ಕ ಪ್ರತಿಫಲವನ್ನು ಕೊಟ್ಟನು.

ಕೀರ್ತನೆಗಳು 18:25 (KANIRV)
Square Portrait Landscape 4K UHD
ನೀನು ಕೃಪೆಯುಳ್ಳವನಿಗೆ ಕೃಪಾವಂತನೂ, ದೋಷವಿಲ್ಲದವನಿಗೆ ನಿರ್ದೋಷಿಯೂ,

ಕೀರ್ತನೆಗಳು 18:26 (KANIRV)
Square Portrait Landscape 4K UHD
ಶುದ್ಧನಿಗೆ ಪರಿಶುದ್ಧನೂ, ಮೂರ್ಖನಿಗೆ ವಕ್ರನೂ ಆಗಿರುವಿ.

ಕೀರ್ತನೆಗಳು 18:27 (KANIRV)
Square Portrait Landscape 4K UHD
ದೀನರನ್ನು ಉದ್ಧರಿಸುವವನೂ, ಗರ್ವದ ಕಣ್ಣುಳ್ಳವರನ್ನು ತಗ್ಗಿಸಿಬಿಡುವವನೂ ನೀನಲ್ಲವೋ?

ಕೀರ್ತನೆಗಳು 18:28 (KANIRV)
Square Portrait Landscape 4K UHD
ನೀನೇ ನನ್ನ ದೀಪವನ್ನು ಹೊತ್ತಿಸುವವನಲ್ಲವೇ; ನನ್ನ ದೇವರಾದ ಯೆಹೋವನು ನನಗೆ ಬೆಳಕನ್ನು ಕೊಟ್ಟು ಕತ್ತಲನ್ನು ಪರಿಹರಿಸುವವನು.

ಕೀರ್ತನೆಗಳು 18:29 (KANIRV)
Square Portrait Landscape 4K UHD
ನಿನ್ನ ಬಲದಿಂದ ದಂಡಿನ ಮೇಲೆ ಬೀಳುವೆನು; ನನ್ನ ದೇವರ ಸಹಾಯದಿಂದ ಗೋಡೆಯನ್ನು ಹಾರುವೆನು.

ಕೀರ್ತನೆಗಳು 18:30 (KANIRV)
Square Portrait Landscape 4K UHD
ದೇವರ ಮಾರ್ಗವು ಯಾವ ದೋಷವೂ ಇಲ್ಲದ್ದು; ಯೆಹೋವನ ವಚನವು ಶುದ್ಧವಾದದ್ದು. ಆತನು ಆಶ್ರಿತರೆಲ್ಲರಿಗೆ ಗುರಾಣಿಯಾಗಿದ್ದಾನೆ.

ಕೀರ್ತನೆಗಳು 18:31 (KANIRV)
Square Portrait Landscape 4K UHD
ಯೆಹೋವನಲ್ಲದೆ ದೇವರು ಯಾರು? ನಮ್ಮ ದೇವರ ಹೊರತು ಶರಣನು ಎಲ್ಲಿ?

ಕೀರ್ತನೆಗಳು 18:32 (KANIRV)
Square Portrait Landscape 4K UHD
ನನಗೆ ಶೌರ್ಯವೆಂಬ ನಡುಕಟ್ಟನ್ನು ಬಿಗಿಯುವವನೂ, ನನ್ನ ಮಾರ್ಗವನ್ನು ಸರಾಗ ಮಾಡುವವನೂ ದೇವರೇ.

ಕೀರ್ತನೆಗಳು 18:33 (KANIRV)
Square Portrait Landscape 4K UHD
ನನ್ನ ಕಾಲನ್ನು ಜಿಂಕೆಯ ಕಾಲಿನಂತೆ ಚುರುಕು ಮಾಡುತ್ತಾನೆ; ನನ್ನನ್ನು ಉನ್ನತಪ್ರದೇಶಗಳಲ್ಲಿ ನಿಲ್ಲಿಸುತ್ತಾನೆ.

ಕೀರ್ತನೆಗಳು 18:34 (KANIRV)
Square Portrait Landscape 4K UHD
ಆತನೇ ನನಗೆ ಯುದ್ಧವಿದ್ಯೆಯನ್ನು ಕಲಿಸಿದ್ದರಿಂದ ನಾನು ತಾಮ್ರದ ಬಿಲ್ಲನ್ನಾದರೂ ಉಪಯೋಗಿಸಬಲ್ಲೆನು.

ಕೀರ್ತನೆಗಳು 18:35 (KANIRV)
Square Portrait Landscape 4K UHD
ನೀನೇ ನನಗೋಸ್ಕರ ಗುರಾಣಿಯನ್ನು ಹಿಡಿದು ರಕ್ಷಿಸಿದ್ದೀ. ನಿನ್ನ ಬಲಗೈ ನನಗೆ ಆಧಾರ; ನಿನ್ನ ಕೃಪಾಕಟಾಕ್ಷವು ನನಗೆ ದೊಡ್ಡಸ್ತಿಕೆಯನ್ನು ಉಂಟುಮಾಡಿದೆ.

ಕೀರ್ತನೆಗಳು 18:36 (KANIRV)
Square Portrait Landscape 4K UHD
ನೀನು ನನ್ನ ಕಾಲುಗಳಿಗೆ ವಿಶಾಲ ಸ್ಥಳವನ್ನು ಕೊಟ್ಟಿದ್ದರಿಂದ ನನ್ನ ಪಾದಗಳು ಕದಲುವುದಿಲ್ಲ.

ಕೀರ್ತನೆಗಳು 18:37 (KANIRV)
Square Portrait Landscape 4K UHD
ನನ್ನ ಶತ್ರುಗಳನ್ನು ಹಿಂದಟ್ಟಿ ಹಿಡಿದುಕೊಳ್ಳುವೆನು; ಅವರನ್ನು ಇಲ್ಲದಂತೆ ಮಾಡುವವರೆಗೂ ಹಿಂದಿರುಗುವುದಿಲ್ಲ.

ಕೀರ್ತನೆಗಳು 18:38 (KANIRV)
Square Portrait Landscape 4K UHD
ಅವರನ್ನು ಹೊಡೆದು ಏಳಲಾರದಂತೆ ಮಾಡುವೆನು; ನನ್ನ ಪಾದದ ಕೆಳಗೆ ಬೀಳುವರು.

ಕೀರ್ತನೆಗಳು 18:39 (KANIRV)
Square Portrait Landscape 4K UHD
ನೀನು ನನಗೆ ಯುದ್ಧಕ್ಕಾಗಿ ಶೌರ್ಯವೆಂಬ ನಡುಕಟ್ಟನ್ನು ಬಿಗಿದಿದ್ದೀ; ಎದುರಾಳಿಗಳನ್ನು ಕುಗ್ಗಿಸಿ ನನಗೆ ಅಧೀನಮಾಡಿದ್ದೀ.

ಕೀರ್ತನೆಗಳು 18:40 (KANIRV)
Square Portrait Landscape 4K UHD
ನನ್ನ ಶತ್ರುಗಳು ನನಗೆ ಬೆನ್ನುಕೊಟ್ಟು ಓಡುವಂತೆ ಮಾಡಿದ್ದೀ; ನನ್ನ ಹಗೆಯವರನ್ನು ನಾನು ನಿರ್ಮೂಲಮಾಡುವೆನು.

ಕೀರ್ತನೆಗಳು 18:41 (KANIRV)
Square Portrait Landscape 4K UHD
ಅವರು ಕೂಗಿಕೊಂಡರೂ ರಕ್ಷಿಸುವವನಿಲ್ಲ; ಯೆಹೋವನಿಗೆ ಮೊರೆಯಿಟ್ಟರೂ ಆತನು ಉತ್ತರವನ್ನು ಕೊಡಲೇ ಇಲ್ಲ.

ಕೀರ್ತನೆಗಳು 18:42 (KANIRV)
Square Portrait Landscape 4K UHD
ಗಾಳಿಯಿಂದ ಬಡಿಸಿಕೊಂಡು ಹೋಗುವ ಧೂಳನ್ನೋ ಎಂಬಂತೆ ಅವರನ್ನು ಪುಡಿಪುಡಿಮಾಡಿದೆನು. ಬೀದಿಯಲ್ಲಿರುವ ಕೆಸರನ್ನೋ ಎಂಬಂತೆ ಅವರನ್ನು ಎಸೆದುಬಿಟ್ಟೆನು.

ಕೀರ್ತನೆಗಳು 18:43 (KANIRV)
Square Portrait Landscape 4K UHD
ಜನರ ಕಲಹಗಳಿಗೆ ನನ್ನನ್ನು ತಪ್ಪಿಸಿ ಜನಾಂಗಗಳಿಗೆ ದೊರೆಯಾಗುವಂತೆ ಮಾಡಿದ್ದೀ; ನಾನರಿಯದ ಜನಾಂಗದವರು ಸಹ ನನಗೆ ಅಧೀನರಾಗುವರು.

ಕೀರ್ತನೆಗಳು 18:44 (KANIRV)
Square Portrait Landscape 4K UHD
ನನ್ನ ಸುದ್ದಿಯನ್ನು ಕೇಳಿದ ಮಾತ್ರಕ್ಕೆ ನನಗೆ ವಿಧೇಯರಾಗುವರು; ದೇಶಾಂತರದವರು ನನ್ನ ಮುಂದೆ ಅಂಜಿ ನಡುಗುವರು.

ಕೀರ್ತನೆಗಳು 18:45 (KANIRV)
Square Portrait Landscape 4K UHD
ಅವರು ಧೈರ್ಯಗುಂದಿದವರಾಗಿ ತಮ್ಮ ತಮ್ಮ ಕೋಟೆಗಳಿಂದ ನಡುಗುತ್ತಾ ಬರುವರು.

ಕೀರ್ತನೆಗಳು 18:46 (KANIRV)
Square Portrait Landscape 4K UHD
ಯೆಹೋವನು ಚೈತನ್ಯಸ್ವರೂಪನು; ನನ್ನ ಶರಣನಿಗೆ ಸ್ತೋತ್ರ; ನನ್ನನ್ನು ರಕ್ಷಿಸುವ ದೇವರಿಗೆ ಕೊಂಡಾಟವಾಗಲಿ.

ಕೀರ್ತನೆಗಳು 18:47 (KANIRV)
Square Portrait Landscape 4K UHD
ಆತನು ನನ್ನ ಶತ್ರುಗಳಿಗೆ ಪ್ರತಿದಂಡನೆಮಾಡುವ ದೇವರು; ಜನಾಂಗಗಳನ್ನು ನನಗೆ ಅಧೀನಪಡಿಸುತ್ತಾನೆ.

ಕೀರ್ತನೆಗಳು 18:48 (KANIRV)
Square Portrait Landscape 4K UHD
ಶತ್ರುಗಳಿಂದ ನನ್ನನ್ನು ಬಿಡಿಸುವಾತನೇ, ನೀನು ನನ್ನನ್ನು ನನ್ನ ಎದುರಾಳಿಗಳಿಗೆ ತಪ್ಪಿಸಿ ಉನ್ನತಪಡಿಸುತ್ತೀ; ಬಲಾತ್ಕಾರಿಗಳಿಂದ ನನ್ನನ್ನು ರಕ್ಷಿಸುತ್ತೀ.

ಕೀರ್ತನೆಗಳು 18:49 (KANIRV)
Square Portrait Landscape 4K UHD
ಈ ಕಾರಣದಿಂದ ಯೆಹೋವನೇ, ಅನ್ಯಜನಗಳ ಮಧ್ಯದಲ್ಲಿ ನಿನ್ನನ್ನು ಸ್ತುತಿಸುವೆನು; ನಿನ್ನ ನಾಮವನ್ನು ಸಂಕೀರ್ತಿಸುವೆನು.

ಕೀರ್ತನೆಗಳು 18:50 (KANIRV)
Square Portrait Landscape 4K UHD
ಆತನು ತಾನು ನೇಮಿಸಿದ ಅರಸನಿಗೋಸ್ಕರ ವಿಶೇಷ ರಕ್ಷಣೆಯನ್ನು ದಯಪಾಲಿಸುವವನಾಗಿದ್ದಾನೆ; ತಾನು ಅಭಿಷೇಕಿಸಿದ ದಾವೀದನಿಗೂ ಮತ್ತು ಅವನ ಸಂತತಿಯವರಿಗೂ ಸದಾಕಾಲ ಕೃಪೆಯನ್ನು ಅನುಗ್ರಹಿಸುವವನಾಗಿದ್ದಾನೆ.

Available Bible Translations

American Standard Version (ASV)
Psalms 18 (ASV) »
King James Version (KJV)
Psalms 18 (KJV) »
GOD’S WORD® (GW)
Psalms 18 (GW) »
Berean Bible (BSB)
Psalms 18 (BSB) »
World English Bible (WEB)
Psalms 18 (WEB) »
French Bible (LSG)
Psaumes 18 (LSG) »
German Bible (LUTH1912)
Psalm 18 (LUTH1912) »
Punjabi Bible (PANIRV)
ਜ਼ਬੂਰ 18 (PANIRV) »
Hebrew Bible (HEB)
תהלים 18 (HEB) »
Portuguese Bible (BSL)
Salmos 18 (BSL) »
Vietnamese Bible (VIE)
Thánh Thi 18 (VIE) »
Spanish Bible (RVA)
Salmos 18 (RVA) »
Italian Bible (RIV)
Salmi 18 (RIV) »
Chinese Simplified (CUVS)
诗 篇 18 (CUVS) »
Chinese Traditional (CUVT)
詩 篇 18 (CUVT) »
Albanian Bible (ALB)
Psalmet 18 (ALB) »
Swedish Bible (SV1917)
Psaltaren 18 (SV1917) »
Russian Bible (RUSV)
Псалтирь 18 (RUSV) »
Ukrainian Bible (UKR)
Псалми 18 (UKR) »
Hungarian Bible (KAR)
Zsoltárok 18 (KAR) »
Bulgarian Bible (BULG)
Псалми 18 (BULG) »
Japanese Bible (JPN)
詩篇 18 (JPN) »
Norwegian Bible (NORSK)
Salmene 18 (NORSK) »

KANIRV Book Selection List